ಬುಧವಾರ, ನವೆಂಬರ್ 23, 2011

ಸಂಡೆ ಮಂಡೆ ತುಸ್ದೆ ...ಆಕಡೆ ..ಇಕದೆ ...ಮುಂದೆ

ಬಿಳಿ ಮೊಲದ ಮೊದಲ ಮುದ್ದು











ಬಿಳಿ ಮೊಲದ ತುಂಟಾಟ ಹೇಳುವ ಮೊದಲು , ಬಿಲಿಮೊಲದ ಬಗ್ಗೆ ಸ್ವಲ್ಪ ಪರಿಚಯ ಕೊಡುವೆ. ವಯಸ್ಸು ಏರಡೂವರೆ, ಮೊಲದ ಹಾಗೆ ಮುಂದೆ ಎರಡು ಹಲ್ಲುಗಳು. ನಗುವಾಗ ಫ್ಲಾಶ್ ಲೈಟ್ ನಂತೆ ಮಿನುಗುತ್ತವೆ. ಬಿಲಿಮೊಲದ ನಖರಗಳು ಏನೇ ಇದ್ದರೂ 'ನಗು' ಮಾತ್ರ ಅಪ್ಪಟ ಚಿನ್ನ. 'ನಕ್ಕರೆ ಅದೇ ಸ್ವರ್ಗ' , ಖಂಡಿತ ಅದೇ ಸ್ವರ್ಗ . 'ನನ್ನ ಬಿಲಿಮೊಲ, ನನ್ನ ಮುದ್ದು ಬಿಲಿಮೊಲ', ಅ೦ಥ ಎತ್ತುಕೊಂಡು ಮುದ್ದಾಡಿದರೆ , 'ಬಿಲಿಮೊಲ' ಅಲ್ಲ... ನಾನು 'ರಿಷಿ' ...'ರಿಸಿಕೆಶ್' ಅ೦ಥ ದೂರ ಚಿಮ್ಮುತ್ತೆ. ಅದರ ಹೆಸರು ರಿಷಿ ಅಥವಾ ರಿಷಿಕೇಶ್ ಆಗಿರಲಿ, ನಮಗಂತೂ ಅದು ಮುದ್ದಾದ , ಚೆಂದದ ಬಿಳಿ ಮೊಲ .

ನಿನ್ನೆ ರಾತ್ರಿ ಸ್ವಲ್ಪ ಲೇಟಾಗಿನೆ , ಅಂದ್ರೆ ಸುಮಾರು ೧೨ ಘಂಟೆಗೆ , ಒಲ್ಲದ ಮನಿಸ್ಸಿನಿಂದ ನಮ್ಮ ಮೊಲ ನಿದ್ರಾದೇವಿಯ ವಶವಾಗಿತ್ತು. ಅಲ್ಲಿಯವರೆಗೆ ಅದರ 'ನಿದ್ರೆ ಬೇಡ' ನಿಲುವಿನ ಮೊಂಡಾಟ ಗಳು ಚಾಲ್ತಿಯಲ್ಲಿದ್ದವು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ